ಚಿತ್ರ: ಪರಿಚಯ
ನಟರು: ತರುಣ್, ರೇಖ
ಗಾಯನ: ಶ್ರೇಯ ಗೋಶಲ್, ಶಾನ್
ಕುಡಿ ನೋಟವೇ ಮನಮೋಹಕ
ಒಡನಾಟವೇ ಬಲು ರೋಚಕ
ಹುಡುಕಾಟವೇ ರೋಮಾಂಚಕ ಆ ಆ .....
ನೀ ಬಂದು ಹೋದ ಜಾಗ ಉಸಿರಾಡಿದೆ ಉಸಿರಾಡಿದೆ
ಬೆರಳೆಲ್ಲ ಓಲೆ ಗೀಚಿ ಮಸಿಯಾಗಿದೆ ಮಸಿಯಾಗಿದೆ
ಕನಸೊಂದು ಕುಲುಕುತ ಕೈಯ
ತುಸು ದೂರ ಚಲಿಸಿದೆ ಎಲ್ಲೋ
ಮನವೀಗ ಮರೆಯುತ ಮೈಯ
ಗುರುತನ್ನೇ ಅರಸಿದೆ ಎಲ್ಲೋ
ನಿನ್ನ ಕಂಡಾಗಲೇ ಜೀವ ಮೂಕ
ಅನುರಾಗಕ್ಕೀಗ ಮಾತೆ ಮಿತಿಯಾಗಿದೆ ಮಿತಿಯಾಗಿದೆ
ಜೊತೆಯಾದ ಮೇಲೆ ಪ್ರೀತಿ ಅತಿಯಾಗಿದೆ ಅತಿಯಾಗಿದೆ
ಮರೆಮಾಚಿ ಕರೆಯಲು ನೀನು
ಮನಸಾರೆ ಪರವಶ ನಾನು
ನೆನಪಾಗಿ ಸುಳಿಯಲು ನೀನು
ನವಿರಾದ ಪರಿಮಳವೇನು
ನೀನೆ ಈ ಜೀವದ ಭಾವಲೋಕ
ಕುಡಿನೋಟವೇ .....
No comments:
Post a Comment