Friday, October 14, 2011

ಪರವಶನಾದೆನು ಅರಿಯುವ ಮುನ್ನವೇ

Movie: Paramaatma
Music: V Harikrishna
Direction: Yograj Bhat
Singer: Sonu Nigam
Lyrics: Jayanth Kaaykini

ಪರವಶನಾದೆನು ಅರಿಯುವ ಮುನ್ನವೇ 
ಪರಿಚಿತನಾಗಲಿ ಹೇಗೆ  ಪ್ರಣಯಕು ಮುನ್ನವೇ 
ಇದಕಿಂತ ಬೇಗ ಇನ್ನೂ ಸಿಗಬಾರದಿತ್ತೆ ನೀನು 
ಇನ್ನಾದರೂ ಕುಡಿಟ್ಟುಕೋ ನೀ ನನ್ನನೂ ಕಳೆಯುವ ಮುನ್ನವೇ
ಪರವಶನಾದೆನು ಅರಿಯುವ ಮುನ್ನವೇ 
ಪರಿಚಿತನಾಗಲಿ ಹೇಗೆ  ಪ್ರಣಯಕು ಮುನ್ನವೇ 

ನಿನ್ನ ಕಣ್ಣಿಗಂತು ನಾನು ನಿರುಪಯೋಗಿ ಇಗಲೂ
ಇನ್ನೂ ಬೇರೆ ಏನು ಬೇಕು ಪ್ರೇಮಯೋಗಿಯಾಗಲು
ಹೂ ಅರಳುವ ಸದ್ದನು ನಿನ್ನ ನಗೆಯಲ್ಲಿ ನಾ ಕೇಳಬಲ್ಲೆ 
ನನ್ನ ಏಕಾಂತವನ್ನು ತಿದ್ದಿ ಕೊಡು ನೀನೀಗ ನಿಂತಲ್ಲೇ 
ನಾನೇನು ಅಂದರೇನು ನನಗಿಂತ ಚೂಟಿ ನೀನು 
ತುಟಿಯಲ್ಲಿಯೇ ಮುಚ್ಚಿಟ್ಟುಕೋ ಮುತ್ತೊಂದನು ಕದಿಯುವ ಮುನ್ನವೇ
ಪರವಶನಾದೆನು ಅರಿಯುವ ಮುನ್ನವೇ 
ಪರಿಚಿತನಾಗಲಿ ಹೇಗೆ  ಪ್ರಣಯಕು ಮುನ್ನವೇ 

ಹಾ... ನಾ ನಾ ......ನ... 
ಕನಸಲಿ ತುಂಬ ಕೆಟ್ಟಿರುವೆನು ನಿನ್ನನು ಕೇಳದೆ 
ರೆಕ್ಕೆಯ ನೀನು ಕಟ್ಟಿರಲು ಈ ಹೃದಯವು ಹಾರಿದೆ 
ನನ್ನ ಕೌತುಕ ಒಂದೊಂದೆ ಹೇಳಬೇಕು 
ಆಲಿಸುವಾಗ ನೋಡು ನನ್ನನೇ ಸಾಕು 
ಸಹವಾಸ ದೋಷದಿಂದ ಸರಿಹೋಗಬಹುದೇ ನಾನು 
ನನಗಾಗಿಯೇ ಕಾದಿಟ್ಟುಕೋ ಹಠವೊಂದನೂ
ಕೆಣಕುವ ಮುನ್ನವೇ 

ಪರವಶನಾದೆನು ಅರಿಯುವ ಮುನ್ನವೇ 
ಪರಿಚಿತನಾಗಲಿ ಹೇಗೆ  ಪ್ರಣಯಕು ಮುನ್ನವೇ

No comments:

Post a Comment