Friday, May 15, 2009

ನೂರು ಜನ್ಮಕು ನೂರಾರು ಜನ್ಮಕು

ಚಿತ್ರ: ಅಮೇರಿಕಾ ಅಮೇರಿಕಾ


ನೂರು ಜನ್ಮಕು ನೂರಾರು ಜನ್ಮಕು
ಒಲವ ಧಾರೆಯೇ ಒಲಿದೊಲಿದು ಬಾರೆಲೆ
ನನ್ನ ಆತ್ಮ ನನ್ನ ಪ್ರಾಣ ನೀನೆಂದು
ನೂರು ಜನ್ಮಕು

ಬಾಳೆಂದರೆ ಪ್ರಣಯಾನುಭಾವ ಕವಿತೆ
ಆತ್ಮಾನುಸಂಧಾನ
ನೆನಪೆಂದರೆ ಮಳೆಬಿಲ್ಲ ಛಾಯೆ
ನನ್ನೆದೆಯ ಬಾಂದಳದಿ ಚಿತ್ತಾರ ಬರೆದವಳೇ
ಸುತ್ತೇಳು ಲೋಕದಲಿ ಮತ್ತೆಲ್ಲೂ ಸಿಗದವಳೇ
ನನ್ನೊಳಗೆ ಹಾಡಾಗಿ ಹರಿದವಳೇ

ಬಾ ಮಲ್ಲಿಗೆ ಮಮಕಾರ ಮಾಯೆ ಪನ್ನೀರ ಜೀವ ನದಿ
ಬಾ ಸಂಪಿಗೆ ಸವಿಭಾವ ಲಹರಿ
ಲೋಕದ ಸುಖವೆಲ್ಲ ನಿನಗಾಗಿ ಮುದಿಪಿರಲಿ
ಇರುವಂಥ ನೂರು ಕಹಿ ಚಿರವಿರಲಿ ನನಗಾಗಿ
ಕಾಯುವೇನು ಕೊನೆವರೆಗೂ ಕಣ್ಣಾಗಿ